ಮಂಗಳವಾರ, ಏಪ್ರಿಲ್ 13, 2021

ಯುಗಾದಿ - ೨೦೨೧

 ಈ ಸಂವತ್ಸರ ಪ್ಲವ

ನೀಗಲಿ ಎಲ್ಲರ ಭವ |


ಹಿಂದೆ ಬಿಟ್ಟು ಮಹಾಮಾರಿ

ಹರುಷ ಬರಲಿ ಮತ್ತೊಂದು ಬಾರಿ |


ಆಗಲಿ ಇದು ಆರೋಗ್ಯ ತರುವ ಯುಗದ ಆದಿ

ಎಲ್ಲರಿಗೂ ಹಾರೈಸುವೆ ನವ ಯುಗಾದಿ |

ಗುರುವಾರ, ನವೆಂಬರ್ 19, 2020

ಬಾ ಮಳೆಯೇ ಬಾ

 ಕಾದಿಹೆ ಮಳೆಯ ಒಂದು ಹನಿಗಾಗಿ

ಕಾದಿಹೆ ನಿನ್ನ ಒಂದು ದನಿಗಾಗಿ |


ತುಸು ದೂರ ಹೋಗಿರುವೆ

ತುಸು ಹೊತ್ತು ಮರೆಯಾಗಿರುವೆ |


ನಿನ್ನ ಕರೆತರಲು ಇಗೋ ನನ್ನ ಕೂಗು

'ದೂರ' ನಿನಗೆ ಸರಿಯೆ ಎಂದು ನೀನೇ ಒಮ್ಮೆ ತೂಗು |


ಸಾಕಿನ್ನು ವಿರಹ

ಬಾ ಬೇಗ ಸನಿಹ |


ಕಾದಿಹೆ ಮಳೆಯ ಒಂದು ಹನಿಗಾಗಿ

ಕಾದಿಹೆ ನಿನ್ನ ಒಂದು ದನಿಗಾಗಿ |

ಬುಧವಾರ, ಜೂನ್ 28, 2017

ಮತ್ತೆ ಹುಟ್ಟಿದೆ

ಅಮ್ಮನ ಪಟ್ಟ ಅರಸಿ ಬರುತಿರೆ
ಮತ್ತೆ ಹುಟ್ಟಿದೆ ನೀನು |
ಇಂದಿನ ನಾಳೆಗೆ ನಾಳೆಯ ಇಂದಿಗೆ
ಕಾತರದೆ ಕಾದಿಹೆ ನಾನು |

ಶುಭಗಲಿ ನಿನಗೆ 
ಎಂದಿನಂತೆ ಎಂದೆಂದೂ |

ಹಿರಿಯರ ಹಿರಿತನ
ಸಿರಿಯರ ಸಿರಿತನ
ದೊರೆಯ ದೊರೆತನ
ನಿನ್ನಲ್ಲಿರಲಿ ಕೊನೆತನ |

ಮಿನುಗುತಾರೆಯ ಹೊಳಪು
ಯುಗ ಕಳೆದಂತೆ ಹೆಚ್ಚಿಸಲಿ
ಈ ಹೊಳಪು ಜಗದಿ
ಎಲ್ಲರೆದೆಯ ಮೆಚ್ಚಿಸಲಿ ||

ಬುಧವಾರ, ಮಾರ್ಚ್ 29, 2017

ಯುಗಾದಿ - 2017

ಮತ್ತೆ ಬಂತು ಹೊಸ ಸಂವತ್ಸರ
ಮುನ್ನುಗ್ಗಿಸಲು ಕುಗ್ಗಿಸಿ ತಾತ್ಸಾರ
ಹೊಸ ಬೆಳಕು ಕಾಣಲಿ ಎಲ್ಲರ ಜೀವನದಿ
ಹರಿಯಲ್ಲಿ ಎಲ್ಲೆಲ್ಲೂ ಹರುಷದ ನದಿ

ಮಂಗಳವಾರ, ಜೂನ್ 28, 2016

ಹುಟ್ಟು ಹಬ್ಬದ ಶುಭಾಶಯಗಳು

ಮರಳಿ ಬರಲಿ ಈ ದಿನ
ನೂರು ಕಾಲ
ಇರಲಿ ಎಲ್ಲ ಸುದಿನ
ನೂರು ಕಾಲ ||

ಚಿಮ್ಮಲಿ ನಿನ್ನ ನಗೆ
ಎಂದೆಂದಿಗೂ
ದುಃಖ ಬರದಿರಲಿ
ಇನ್ನೆಂದಿಗೂ ||

ನನ್ನೆಲ್ಲ ಹಾರೈಕೆ
ನಿನಗಾಗಿ ಇಂದು
ನಗು ನಗುತ ನೀ ಬಾಳು
ಇಂದು ಎಂದೆಂದು ||

ಶುಕ್ರವಾರ, ಡಿಸೆಂಬರ್ 4, 2015

ಹಾರೈಸ ಬನ್ನಿ

ಸಹೃದಯಗಳ ಸಮ್ಮಿಲನದ ಸಂಭ್ರಮಕೆ
ಮೆರಗುನೀಡಲು ಬಂದಿರುವ ಹಿತಚಿಂತಕರೆ
ಹಾರೈಸ ಬನ್ನಿ ಈ ಜೋಡಿಯ ಸಂತಸಕೆ

ಮುಂದೇಳು ಜನುಮದಲಿ
ಜೊತೆಯಾಗಿ ನಾವಿರಲಿ
ಎಂಬ ಹಾರೈಕೆ ನಿಮ್ಮದಾಗಲಿ

ಕಷ್ಟದ ತೆಪ್ಪದಲಿ
ಇಷ್ಟದ ತೇರಿನಲಿ
ನಾವೆಂದೂ ಜೊತೆಗಿರಲಿ
ಎಂಬ ಹಾರೈಕೆ ನಿಮ್ಮದಾಗಲಿ

ಇಂದಿರುವ ಸಂತಸವು
ವೃದ್ಧಿಸಲಿ ಕ್ಷಣ-ಕ್ಷಣವು
ಮುಂಬರುವ ಸಂತಸವು
ಇರಲಿರಲಿ ಅನುದಿನವು
ಎಂಬ ಹಾರೈಕೆ ನಿಮ್ಮದಾಗಲಿ

ಗುರುವಾರ, ನವೆಂಬರ್ 19, 2015

ನನ್ನ ಹುಡುಗಿ

ಬೆಳಕಿನ ಹಾದಿಯ ರಂಗೇರಿಸಲು
ಅಂದದ ಮನೆಯ ಚಂದವ ಹೆಚ್ಚಿಸಲು
ಬರುತಿಹಳೆನ್ನ ಹೃದಯದ ಅರಸಿ
ಇರುವೆನು ಜೊತೆಗೆ ಎಂದು ಹರಸಿ

ಸೋಮವಾರ, ನವೆಂಬರ್ 9, 2015

ರಾಜ್ಯೋತ್ಸವ - ೨೦೧೫

ದಸರಾ ವಿಶೇಷ ನಾಡಿನಲಿ
ತಿಂದು ತೇಗಿ ಹಾಡಿ ನಲಿ |
ವರುಷದಿ ಒಮ್ಮೆ ಬರುವುದು
ನಮ್ಮ ಕನ್ನಡ ರಾಜ್ಯೋತ್ಸವ |
ಹರುಷವು ಎಲ್ಲೆಡೆ ಸುರಿವುದು
ಕಂಡರೆ ಕನ್ನಡಾಂಬೆಯ ಉತ್ಸವ ||

ಬುಧವಾರ, ನವೆಂಬರ್ 4, 2015

ವಿಶೇಷತೆ

ಈ ಬಾನಲ್ಲಿ ನೀನು ಒಂಟಿ ಹಕ್ಕಿ
ಆದರೆ ಅಳಲಾರೆ ನೀ ಬಿಕ್ಕಿ ಬಿಕ್ಕಿ ||
ಎಂದೆಂದೂ ಒಂಟಿ ಆ ಚುಕ್ಕಿ ಈ ಚುಕ್ಕಿ
ಬಳಲದಿರು ನೀ ಕೊಂಚ ಸೊಕ್ಕಿ ||

ಸವಿನೆನಪು

ಎಲ್ಲರಂತೆ ನೀನೊಂದು ಮೀನು
ಮಿಂಚುವೆ ಎಲ್ಲರಿಗೂ ಮಿಗಿಲು ನೀನು ||
ಬಾರದದು ಮನಸ್ಸಿಗೆ ಗೂನು
ರಂಜಿಸುತಿರೆ ಎಂದೆಂದಿಗೂ ನೀನು ||