ಶುಕ್ರವಾರ, ಆಗಸ್ಟ್ 2, 2013

ಅಮ್ಮ

ತೊದಲಿದರೂ ಮೊದಲಿಗೆ ನುಡಿವ ಶಬ್ದ
ಕೇಳದಿರೆ ಆ ಶಬ್ದ, ತತ್‌ಕ್ಷಣ ಈ ಜಗ ಸ್ತಬ್ಧ !
ಮುಖ ನೋಡದಿರೆ ಏನು ನಷ್ಟ
ಆ ಸುಖ ನೋಡುವುದು ನನಗೆ ಇಷ್ಟ ||

ಇಟ್ಟಾಗ ಮೊದಲ ಅಂಬೆಗಾಲು
ನುಡಿದಾಗ ಮೊದಲ ತೊದಲ ಸಾಲು
ಚಿಮ್ಮುವುದು ನಿನ್ನ ಮುಖಕಮಲದಿ ಹೊನ್ನಗೆ
ಮೂಡುವುದು ಮುಗುಳ್ನಗೆ, ಕಂಡಾಗ ನಮ್ಮ ಆಟ ಬಗೆ-ಬಗೆ ||

ಆಗುವೆ ಏಳುವಾಗಿನ ಕೋಳಿ, ಮಲಗುವಾಗಿನ ಲಾಲಿ
ಓಡುವೆ ಜೊತೆ ಜೊತೆಗೆ ಮೈಲಿ ಮೈಲಿ |
ತೋರುವೆ ಸಿಟ್ಟು, ಕೊಡುವೆ ಏಟು
ಮಾಡದಿರೆನು ಬೊಟ್ಟು, ತಿಳಿದು ಅದರ ಗುಟ್ಟು ||

ಗುಟ್ಟು ರಟ್ಟಾದಾಗಲೆ ನಿನ್ನ ಏಳಿಗೆ
ಅವಳದೇ ಆದರ್ಶ ನಿನ್ನ ಬಾಳಿಗೆ |
ದೊಡ್ಡವರಾದೊಡೆ ಓಡದಿರು ದೂರ
ನೀನೆಂದೂ ಅವಳಿಗೆ 'ಪುಟ್ಟ ಪೋರ' ||