ಶುಕ್ರವಾರ, ಡಿಸೆಂಬರ್ 4, 2015

ಹಾರೈಸ ಬನ್ನಿ

ಸಹೃದಯಗಳ ಸಮ್ಮಿಲನದ ಸಂಭ್ರಮಕೆ
ಮೆರಗುನೀಡಲು ಬಂದಿರುವ ಹಿತಚಿಂತಕರೆ
ಹಾರೈಸ ಬನ್ನಿ ಈ ಜೋಡಿಯ ಸಂತಸಕೆ

ಮುಂದೇಳು ಜನುಮದಲಿ
ಜೊತೆಯಾಗಿ ನಾವಿರಲಿ
ಎಂಬ ಹಾರೈಕೆ ನಿಮ್ಮದಾಗಲಿ

ಕಷ್ಟದ ತೆಪ್ಪದಲಿ
ಇಷ್ಟದ ತೇರಿನಲಿ
ನಾವೆಂದೂ ಜೊತೆಗಿರಲಿ
ಎಂಬ ಹಾರೈಕೆ ನಿಮ್ಮದಾಗಲಿ

ಇಂದಿರುವ ಸಂತಸವು
ವೃದ್ಧಿಸಲಿ ಕ್ಷಣ-ಕ್ಷಣವು
ಮುಂಬರುವ ಸಂತಸವು
ಇರಲಿರಲಿ ಅನುದಿನವು
ಎಂಬ ಹಾರೈಕೆ ನಿಮ್ಮದಾಗಲಿ

ಗುರುವಾರ, ನವೆಂಬರ್ 19, 2015

ನನ್ನ ಹುಡುಗಿ

ಬೆಳಕಿನ ಹಾದಿಯ ರಂಗೇರಿಸಲು
ಅಂದದ ಮನೆಯ ಚಂದವ ಹೆಚ್ಚಿಸಲು
ಬರುತಿಹಳೆನ್ನ ಹೃದಯದ ಅರಸಿ
ಇರುವೆನು ಜೊತೆಗೆ ಎಂದು ಹರಸಿ

ಸೋಮವಾರ, ನವೆಂಬರ್ 9, 2015

ರಾಜ್ಯೋತ್ಸವ - ೨೦೧೫

ದಸರಾ ವಿಶೇಷ ನಾಡಿನಲಿ
ತಿಂದು ತೇಗಿ ಹಾಡಿ ನಲಿ |
ವರುಷದಿ ಒಮ್ಮೆ ಬರುವುದು
ನಮ್ಮ ಕನ್ನಡ ರಾಜ್ಯೋತ್ಸವ |
ಹರುಷವು ಎಲ್ಲೆಡೆ ಸುರಿವುದು
ಕಂಡರೆ ಕನ್ನಡಾಂಬೆಯ ಉತ್ಸವ ||

ಬುಧವಾರ, ನವೆಂಬರ್ 4, 2015

ವಿಶೇಷತೆ

ಈ ಬಾನಲ್ಲಿ ನೀನು ಒಂಟಿ ಹಕ್ಕಿ
ಆದರೆ ಅಳಲಾರೆ ನೀ ಬಿಕ್ಕಿ ಬಿಕ್ಕಿ ||
ಎಂದೆಂದೂ ಒಂಟಿ ಆ ಚುಕ್ಕಿ ಈ ಚುಕ್ಕಿ
ಬಳಲದಿರು ನೀ ಕೊಂಚ ಸೊಕ್ಕಿ ||

ಸವಿನೆನಪು

ಎಲ್ಲರಂತೆ ನೀನೊಂದು ಮೀನು
ಮಿಂಚುವೆ ಎಲ್ಲರಿಗೂ ಮಿಗಿಲು ನೀನು ||
ಬಾರದದು ಮನಸ್ಸಿಗೆ ಗೂನು
ರಂಜಿಸುತಿರೆ ಎಂದೆಂದಿಗೂ ನೀನು ||

ಬುಧವಾರ, ಅಕ್ಟೋಬರ್ 21, 2015

ಹಾರೈಕೆ

ವಯಸ್ಸು ನಿಮ್ಮದು ಹಾಕಿಸುವುದು ಕೇಕೆ
ಗಮನ ಕೊಟ್ಟು ಓದಿ, ಎಲ್ಲೂ ಜಾರದಿರಿ ಜೋಕೆ
ಮುನ್ನುಗ್ಗಲು ಯತ್ನಿಸು ನೀ, ಕಾಲೆಳೆದರೂ ಆಕೆ-ಈಕೆ
ವಟ್ಟಿನಲ್ಲಿ ಎಲ್ಲರಿಗೂ ಒಳ್ಳೆಯದಾಗಲಿ ಎಂಬುದೇ ನನ್ನ ಹಾರೈಕೆ |

ಕೊಲೆ

ಹಗಲಲ್ಲೂ ಕಾಣುವ ಬೆಳದಿಂಗಳ ಬಾಲೆ
ತಪ್ಪದೆ ಬರುವೆ, ತೆರೆದಿರು ನಿನ್ನ ಹೃದಯ ಶಾಲೆ |
ಇದು ಅಲ್ಲ ಬಾರಿ ಚಿಕ್ಕ ಪಿಕ್ಕ ಓಲೆ
ನಿಜವಾಗಿ ಆಗಿದೆ ನನ್ನ ಮನದ ಶಾಂತಾ ಅಲೆಯ ಕೊಲೆ |

ಭಾನುವಾರ, ಸೆಪ್ಟೆಂಬರ್ 13, 2015

ಹುಬ್ಬಳ್ಳಿ - ಧಾರವಾಡ

ಹೊಟೇಲಿನಲ್ಲಿ ಇರುವಂತೆ ಇಡ್ಲಿ - ವಡಾ
ಕರ್ನಾಟಕಕ್ಕೆ ಬೇಕು ಹುಬ್ಬಳ್ಳಿ - ಧಾರವಾಡ
ತುಂಬಿದರೆ ತುಳುಕದು ಯಾವುದೇ ಕೊಡ
ಹೀಗೆಯೇ ನಮ್ಮ ಹುಬ್ಬಳ್ಳಿ - ಧಾರವಾಡ ||

ಬರುವಾದಂತೆ ಹುಬ್ಬಲ್ಲಿಗೂ IT
ಎಲ್ಲರೂ ಹೊಡೆದರು ಜೋರಾಗಿ ಸೀಟಿ
ಊರಿಗೆಲ್ಲ ಖುಷಿಯಿಂದ ಕುಡಿಸಿದರು
Computer ಕಳಿಸಿದರು ಮಕ್ಕಳಿಗೆ ಕೊಟ್ಟು ಪೇಣೆ - ಪಾಟಿ ||

ಹೊಸೂರಿನಲ್ಲಿ ಟ್ರಾಫಿಕ್ ಲೈಟ್
ಚೆನ್ನಮ್ಮ ವೃತ್ತದಲ್ಲಿ ಟ್ರಾಫಿಕ್ ಟೈಟ್
ಮೊದಲು ಹೋಗಲು ಎಲ್ಲರಿಗೂ ಫೈಟ್
ಗಾಡಿ ಹೋಗಲು ಪೊಲೀಸ್ ಹೇಳಬೇಕು ರೈಟ್ ರೈಟ್ ||

ಬಂದು ನೋಡಿ ಹುಬ್ಬಳ್ಳಿ - ಧಾರವಾಡ
ಸವಿಯ ಬನ್ನಿ ಸುಪ್ರಸಿದ್ಧ ಧಾರವಾಡ ಪೇಡ
ಇಲ್ಲಿ ಸಿಗುವದು ಅತ್ತ್ಯುತ್ತಮ ಪೇಡಾ
ತಿಂದರೆ ಮೇಲೆ ಕುಡಿಯಬೆಕಿಲ್ಲ ಸೋಡಾ ||

ಶನಿವಾರ, ಜನವರಿ 17, 2015

ಕನಸೋ ನನಸೋ!?

ಬಂದು ನಿಂತೆ ನೀ ನನ್ನ ಕಣ್ಣ ಮುಂದೆ,
ಮಾತನಾಡಿ ಬೆರಗು ಮಾಡಿ ಮಾಯವಾದೆ!
ಸ್ವಪ್ನದಿ ಕಂಡಂತೆ ನಾ ಬಿಸಿಲುಕುದುರೆ,
ಮರುಕ್ಷಣವೇ ಬರಿದಾಯ್ತೆನ್ನ ಹೃದಯ ಸೆರೆ.

ಶುಕ್ರವಾರ, ಜನವರಿ 9, 2015

ಪ್ರಥಮ ಭೇಟಿ

ಮನದಾಳದ ಮಾತು
ಹೊಳೆಯಾಗಿ ಹರಿದಂತೆ,
ಕಲ್ಪನೆಯ ಕಾರಂಜಿ
ಛಲ್ಲೆಂದು ಚಿಮ್ಮಿದಂತೆ,
ಬಂದಿರುವೆ ಕಣ್ಮುಂದೆ
ಓ ಕನಸಿನ .. ದೇವತೆ,
ಖುಷಿಯಿಂದ ಹೊರ ಹೊಮ್ಮದೆ
ಒಂದು ಚಿಕ್ಕ ಕವಿತೆ?