ಭಾನುವಾರ, ಸೆಪ್ಟೆಂಬರ್ 16, 2012

ಮುನಿಸು...


ಹಿಂದೆ ನೋಡದೆ
ಮುಂದೆ ತಿಳಿಯದೆ
ತೆರಳದಿರು ಎನ್ನ ದೀಪವೆ |
ವಿವಿಧ ಕಾರಣದೆ
ಮೂಢನಾದೆ
ನನ್ನ ಮೇಲೆ ಕೋಪವೆ |
ತಪ್ಪು ಕೂಗು ಆಲಿಸಿದಕೆ
ನಿನ್ನ ಮನ ನೋಯಿಸಿದಕೆ
ಏರಿದೆ ಊರಿನ ತಾಪವೆ |
ತಿರುಗಿ ಬಾ ಎನ್ನ ಬಾಳಿಗೆ
ಮರೆತು ಆ ಕೆಟ್ಟ ಘಳಿಗೆ
ಇಷ್ಟು ದೊದ್ದ ಶಾಪವೆ !

ಬುಧವಾರ, ಸೆಪ್ಟೆಂಬರ್ 5, 2012

ಮತ್ತೆ ಹಾರಲಿ ಬಾವುಟ..

ಕತ್ತಲಲ್ಲಿ ಕಳೆದು ಹೋದ
ಕಣ್ಣೀರಲ್ಲಿ ತೊಳೆದು ಹೋದ
ಶಾಂತ ಮಾತೆಯ ಮುಕುಟ |
ಎದ್ದು ಬರಲಿ ಬೆಳಕಿನೆಡೆಗೆ
ಸದ್ದು ಮಾಡಿ ಎಲ್ಲ ಕಡೆಗೆ
ಕಾಣುತಿರಲಿ ಭೂಪಟ
ಮತ್ತೆ ಹಾರಲಿ ಬಾವುಟ ||

ಪ್ರಕೃತಿ

ಬೆಳಕಿಡುವೆ ನಮಗೆ ಎಂದೆಂದಿಗೂ
ಫಲ ಕೊಡುವೆ ನಮಗೆ ಎಂದೆಂದಿಗೂ
ನೀನಿರು ಎಂದೆಂದಿಗೂ ನಗುವ ಬೀರುತ
ಮೃಗ ಪಕ್ಷಿ ನಿನ್ನಡಿ ಆಡಲಿ ನಲಿಯುತ ||

ಎಚ್ಚರ!!

ಎತ್ತ ನೋಡಿದರೂ ಆವರಿಸಿದೆ ಧೂಳು
ಇದರಲ್ಲೇ ಮುಳುಗಿ ಹಾಳಾಗದಿರಲಿ ಎಮ್ಮ ಬಾಳು |
ಇನ್ನಾದರೂ ತಡೆ, ಪರಿಸರವಾಗದಿರಲಿ ಹಾಳು
ಸಿಗುತಿರಲಿ ನಿನಗೆ ಹೊತ್ತು ಹೊತ್ತಿಗೆ ಕೂಳು ||

ಭರವಸೆ

ಆಗುತಿರುವೆಯಲ್ಲ ಹಾಳು ಈ ದುಷ್ಟ ಮಾನವನಿಂದ |
ನಿನಗೆ ಬೇಕು ಬಾಳು, ನೀ ನಗಬೇಕು ಆನಂದದಿಂದ ||
ಆಗಲೇ ನಮ್ಮೆಲ್ಲರ ಏಳಿಗೆ, ಹಳಿಯುತ್ತಿಲ್ಲ ಈ ನನ್ನ ನಾಲಿಗೆ |
ಇನ್ನು ಹೆದರದಿರು ಈ ಧೂಳಿಗೆ, ನಾವು ಆಗುವೆವು ನಿನ್ನ ಪಾಲಿಗೆ ||

ಪ್ರಶ್ನೆ...

ಏಕೆ ಓಡುತಿರುವೆ ಸರ ಸರ
ನಿಲ್ಲು, ನೋಡು ಈ ಪ್ರಕೃತಿ - ಪರಿಸರ ||
ಎಷ್ಟು ತುಂಬಿದೆ ಇಲ್ಲಿ ಧೂಳು
ಹೀಗೇಕೆ ಮಾಡಿರುವೆ ಇದನ್ನು ಹಾಳು ??

ನಿಸರ್ಗದ ಮಡಿಲಲಿ

ನೋಡು ನೀ ಅಲ್ಲಿ ಇಲ್ಲಿ
ಎಲ್ಲೆಲ್ಲೂ ಹಕ್ಕಿಗಳ ಚಿಲಿಪಿಲಿ |
ನಲಿ ನೋಡಿ ಈ ಹಸಿರ
ಕೇಳು ಅದರ ಹೆಸರ |
ಅವಳೆಡೆಗಿನ ಪ್ರೀತಿಯನ್ನೇಕೆ ಇಡುವೆ ಮುಚ್ಚಿ
ಹಾರಾಡು ಅವಳ ಮಡಿಲಲಿ ರೆಕ್ಕೆ ಬಿಚ್ಚಿ ||

ಕಾಮನಬಿಲ್ಲು

ಕರಿ ಮೋಡಗಳ ಹಿಂದೆ ಆಡುತ್ತಿರುವನು
ರವಿ ಕಣ್ಣಾ ಮುಚ್ಚಾಲೆ |
ಬಿಸಿಲೂ ಇರೆ ಮಳೆಯೂ ಬರೆ
ಆಕಾಶವು ಹಾಕುವುದು ರಂಗೋಲೆ ||

ಜಾಣತನ

ಅತ್ತ ಇತ್ತ  ಸುತ್ತ ಮುತ್ತ ಗಿಡ ಮರ ಬಳ್ಳಿ
ಅಣೆ ಲೆಕ್ಕದ ಮುತ್ತು ರತ್ನ ಬಂಗಾರ ಬೆಳ್ಳಿ|
ಎಲ್ಲೆಲ್ಲೂ ಕಂದು ಹಸಿರು ಬಣ್ಣ |
ಎಲ್ಲರೂ ಒಬ್ಬರಿಗೊಬ್ಬರು ತಮ್ಮ ಅಣ್ಣ||

ಅಮ್ಮ

ತೊದಲಿದರೂ ಮೊದಲಿಗೆ ನುಡಿಯುವ ಶಬ್ದ
ಕೇಳಿದಾಕ್ಷಣ ಈ ಜಗವೇ ಸ್ಥಬ್ದ ||
ಮುಖ ನೋಡಿದರೇನು ನಷ್ಟ
ಆ ಸುಖ ನೋಡುವುದೆನಗೆ ಇಷ್ಟ

ಇಟ್ಟಾಗ ಮೊದಲ ಅಂಬೆಗಾಲು
ನುಡಿದಾಗ ಮೊದಲ ತೊದಲ ಸಾಲು |
ಚಿಮ್ಮುವುದು ಮುಖ ಕಮಲದಿ ಹೂನಗೆ ||
ಮೂಡುವುದು ಮುಗುಳ್ನಗೆ, ಕಂಡಾಗ ನಮ್ಮ ಆಟ ಬಗೆ-ಬಗೆ

ಆಗುವಳು ಏಳುವಾಗಿನ ಕೋಳಿ | ಮಲಗುವಾಗಿನ ಲಾಲಿ
ಓಡುವಳು ಜೊತೆ ಜೊತೆಗೆ ದೂರ ಮೈಲಿ ಮೈಲಿ ||
ತೋರುವಳು ಸಿಟ್ಟು, ಕೊಡುವಳು ಏಟು
ಮಾಡದಿರು ಬೊಟ್ಟು, ತಿಳಿ ಅದರ ಗುಟ್ಟು ||

ಗುಟ್ಟು ರಟ್ಟಾದಾಗಲೇ ನಿನ್ನ ಏಳಿಗೆ
ಅವಳದೇ ಆದರ್ಶ ನಿನ್ನ ಬಾಳಿಗೆ |
ದೊಡ್ಡವನಾದೊಡೆ ಓಡದಿರು ದೂರ
ನೀನೆಂದೂ ಅವಳಿಗೆ ಇನ್ನು ಪುಟ್ಟ ಪೋರ ||

ಯುಗಾದಿ

ಬಂತು ನಮಗೆ ಹೊಸ ವರುಷ
ಎಲ್ಲೆಲ್ಲೂ ಕಾಣಲಿ ಸಂತಸ - ಹರುಷ
ನಮ್ಮ ಕನಸುಗಳಿಗೆ ಸಿಗಲಿ ಹೊಸ ಹಾದಿ
ಇಗೊ ಮತ್ತೆ ಬಂತು ಹೊಸ ಯುಗಾದಿ

ಅಪಹರಣ

ಏಳಿ ಎದ್ದೇಳಿ, ಎಲ್ಲರಿಗೂ ಸಂದೇಶ ಸಾರುವ
ಗಿರಿ-ವನ-ಮೃಗಗಳ "ಪಾಡು" ಪಾಡುವ
ಕೆಲವೆಡೆ ಮಂಜು ಅಪಹರಿಸಿದೆ ಗುಡ್ಡವ
ಉಳಿದೆಡೆ ಇರುವ ಸಜೀವ  / ನಿರ್ಜೀವ ಸಂಪತ್ತು |
ಉಳಿಸಿದರೆ ಸಾಕು, ಖುಷಿಪಡುವ ||

ಅಲಕ್ಷ್ಯ

ಶಾಲೆಯ ವ್ಯಾಕರ್ಣದಿ ಬರಿ ಓದು |
ನಾಮಪದ ಸರ್ವನಾಮ ||
ಯಾರಿಗೆ ಲಕ್ಷ್ಯ ಪಕ್ಷಿ-ಗಿರಿಧಾಮ ||

ತಪ್ಪು - ಸರಿ

ಕೈಲಾಗದವನ ಕಂಡು ಸುಮ್ಮನಿರು
ಕನ್ಯೆಯರು ಪಕ್ಕದಲಿ ಇರುತಿರೆ |
ಮುದುಕಿಯರ ನೋಡದಿರು ||
ಎದ್ದು ನಡೆ ಬರದು ಆಪತ್ತು
ಒಳ್ಳೆಯ ಗುಣ - ಇದುವೆ ನಮಗೆಲ್ಲ ಸಂಪತ್ತು ||

ಮೊಬೈಲು ಮಹಿಮೆ...

ಇದ್ದರೆ ಕೈಯ್ಯಲ್ಲಿ Mobileಉ
ಜನ ಜಾತ್ರೆಯೂ ಬೈಲು - ಬೈಲು!!

ತಪ್ಪು ಭಿಕ್ಷೆ


ಅನ್ನವಿಲ್ಲದವನ ಬಿಟ್ಟು ಅನ್ಯನಿಗೆ ಕೊಡು
ಬಡವನ ನೂಕಿ ಬಲ್ಲಿವನಿಗೆ ಲಂಚವಿಡು
ಕೈ ಕಾಲಿಲ್ಲದ ಭಿಕ್ಷುಕನ ತಳ್ಳಿ ಚಪ್ಪಾಳೆ ತಟ್ಟಿ |
ಬೇಡುವ ಹಗಲು ದರೋಡೆಕೋರನಿ(ಳಿ)ಗೆ ಕೊಡು ||