ಶುಕ್ರವಾರ, ಆಗಸ್ಟ್ 2, 2013

ಅಮ್ಮ

ತೊದಲಿದರೂ ಮೊದಲಿಗೆ ನುಡಿವ ಶಬ್ದ
ಕೇಳದಿರೆ ಆ ಶಬ್ದ, ತತ್‌ಕ್ಷಣ ಈ ಜಗ ಸ್ತಬ್ಧ !
ಮುಖ ನೋಡದಿರೆ ಏನು ನಷ್ಟ
ಆ ಸುಖ ನೋಡುವುದು ನನಗೆ ಇಷ್ಟ ||

ಇಟ್ಟಾಗ ಮೊದಲ ಅಂಬೆಗಾಲು
ನುಡಿದಾಗ ಮೊದಲ ತೊದಲ ಸಾಲು
ಚಿಮ್ಮುವುದು ನಿನ್ನ ಮುಖಕಮಲದಿ ಹೊನ್ನಗೆ
ಮೂಡುವುದು ಮುಗುಳ್ನಗೆ, ಕಂಡಾಗ ನಮ್ಮ ಆಟ ಬಗೆ-ಬಗೆ ||

ಆಗುವೆ ಏಳುವಾಗಿನ ಕೋಳಿ, ಮಲಗುವಾಗಿನ ಲಾಲಿ
ಓಡುವೆ ಜೊತೆ ಜೊತೆಗೆ ಮೈಲಿ ಮೈಲಿ |
ತೋರುವೆ ಸಿಟ್ಟು, ಕೊಡುವೆ ಏಟು
ಮಾಡದಿರೆನು ಬೊಟ್ಟು, ತಿಳಿದು ಅದರ ಗುಟ್ಟು ||

ಗುಟ್ಟು ರಟ್ಟಾದಾಗಲೆ ನಿನ್ನ ಏಳಿಗೆ
ಅವಳದೇ ಆದರ್ಶ ನಿನ್ನ ಬಾಳಿಗೆ |
ದೊಡ್ಡವರಾದೊಡೆ ಓಡದಿರು ದೂರ
ನೀನೆಂದೂ ಅವಳಿಗೆ 'ಪುಟ್ಟ ಪೋರ' ||

ಭಾನುವಾರ, ಮಾರ್ಚ್ 17, 2013

ನನ್ನ ದೇಶ ನನ್ನ ಜನ


ತಪ್ಪಿದಾಗ ಕೇಳಿದರೆ ಅಂತಾರೆ
ಶತಮಾನಗಳಿಂದ ನಡೆದು ಬಂದ ಪರಂಪರೆ ||
ಇದೆಂಥ ಮನ್ನಣೆ, ಇದೆಂಥ ಬಣ್ಣನೆ
ಬೇಕೇ ಬೇಕು ಇದಕ್ಕೆ ದಂಡನೆ ||

ಶುಕ್ರವಾರ, ಫೆಬ್ರವರಿ 22, 2013

ಸುಯೋಗ (ಅವಕಾಶ)

ತೆರಳದೆ ಮರೆಯಾಗಿ ಹೋದೆ
ಅರಳದೆ ಮೊಗ್ಗಾಗಿ ಉಳಿದೆ |

ಮತ್ತೆ ನೀ ಬಂದಾಗ
ಬಳಿಯಲೇ ನಿಂದಾಗ
ಮಾಡುವೆ ನಿನ್ನ ಸದುಪಯೋಗ
ಇಲ್ಲದಿರೆ ನಾನಾಗುವೆ ನಿರುಪಯೋಗ |

ಬುಧವಾರ, ಫೆಬ್ರವರಿ 20, 2013

ಸ್ಪೂರ್ತಿ

ಅಳುತ ಕುಳಿತಿದ್ದೆ ಕತ್ತಲಲಿ
ನೀ ಬಂದೆ ಬೆಳಕಂತೆ,
ಸ್ಪೂರ್ತಿ ಚಿಮ್ಮಿತು ಬಾಳಿನಲಿ
ಭೋರ್ಗರೆವ ಜೋಗದಂತೆ |

ಸೋಮವಾರ, ಫೆಬ್ರವರಿ 18, 2013

ಗುರು


ಮಿನುಗು ತಾರೆಯಾಗಿ ಬಂದೆ
ಹೊಳೆವ ದೀಪವಾಗಿ ನಿಂದೆ |
ಮೀರಿ ನಿಂತೆ ಎನ್ನ ತಾಯಿ ತಂದೆ
ನಿನ್ನ ಗುಣ ಸುಗುಣ ಒಂದೇ ||

ಬುಧವಾರ, ಜನವರಿ 30, 2013

ನೀ ನಗು

ಉದಾಸೀನತೆ ಬಿಟ್ಟು ನೀ ನಗು
ದುಃಖದಿಂದ ಲಾಭವಿಲ್ಲ ಎನಗೂ ನಿನಗೂ |
ಪುಟ್ಟ ಕಂದನ ನೋಡಿ ನೀ ಸೊಬಗು
ಎಲ್ಲ ಮರೆತು ನಗು, ಮುಗುಳ್ನಗು ||

ಬಲ್ಲವನು

ಯಾರಿಗೆ ಕೇಳುವೊದೋ ಮನದಾಳದ ಮಾತು
ಅವನು ನಿನ್ನನ್ನು ಬಲ್ಲವನು |
ಅಂಥವನಿಗೆ ಎಂದೆಂದೂ ಬಾಳು ಸೋತು
ಅವ ನಿನಗೆ ಕೊಡುವ ಎಲ್ಲವನು ||