ಹಿಂದೆ ನೋಡದೆ
ಮುಂದೆ ತಿಳಿಯದೆ
ತೆರಳದಿರು ಎನ್ನ ದೀಪವೆ |
ವಿವಿಧ ಕಾರಣದೆ
ಮೂಢನಾದೆ
ನನ್ನ ಮೇಲೆ ಕೋಪವೆ |
ತಪ್ಪು ಕೂಗು ಆಲಿಸಿದಕೆ
ನಿನ್ನ ಮನ ನೋಯಿಸಿದಕೆ
ಏರಿದೆ ಊರಿನ ತಾಪವೆ |
ತಿರುಗಿ ಬಾ ಎನ್ನ ಬಾಳಿಗೆ
ಮರೆತು ಆ ಕೆಟ್ಟ ಘಳಿಗೆ
ಇಷ್ಟು ದೊದ್ದ ಶಾಪವೆ !
ಆಗುತಿರುವೆಯಲ್ಲ ಹಾಳು ಈ ದುಷ್ಟ ಮಾನವನಿಂದ | ನಿನಗೆ ಬೇಕು ಬಾಳು, ನೀ ನಗಬೇಕು ಆನಂದದಿಂದ || ಆಗಲೇ ನಮ್ಮೆಲ್ಲರ ಏಳಿಗೆ, ಹಳಿಯುತ್ತಿಲ್ಲ ಈ ನನ್ನ ನಾಲಿಗೆ | ಇನ್ನು ಹೆದರದಿರು ಈ ಧೂಳಿಗೆ, ನಾವು ಆಗುವೆವು ನಿನ್ನ ಪಾಲಿಗೆ ||
ನೋಡು ನೀ ಅಲ್ಲಿ ಇಲ್ಲಿ ಎಲ್ಲೆಲ್ಲೂ ಹಕ್ಕಿಗಳ ಚಿಲಿಪಿಲಿ | ನಲಿ ನೋಡಿ ಈ ಹಸಿರ ಕೇಳು ಅದರ ಹೆಸರ | ಅವಳೆಡೆಗಿನ ಪ್ರೀತಿಯನ್ನೇಕೆ ಇಡುವೆ ಮುಚ್ಚಿ ಹಾರಾಡು ಅವಳ ಮಡಿಲಲಿ ರೆಕ್ಕೆ ಬಿಚ್ಚಿ ||