ಶುಕ್ರವಾರ, ಜನವರಿ 9, 2015

ಪ್ರಥಮ ಭೇಟಿ

ಮನದಾಳದ ಮಾತು
ಹೊಳೆಯಾಗಿ ಹರಿದಂತೆ,
ಕಲ್ಪನೆಯ ಕಾರಂಜಿ
ಛಲ್ಲೆಂದು ಚಿಮ್ಮಿದಂತೆ,
ಬಂದಿರುವೆ ಕಣ್ಮುಂದೆ
ಓ ಕನಸಿನ .. ದೇವತೆ,
ಖುಷಿಯಿಂದ ಹೊರ ಹೊಮ್ಮದೆ
ಒಂದು ಚಿಕ್ಕ ಕವಿತೆ?

ಭಾನುವಾರ, ಸೆಪ್ಟೆಂಬರ್ 21, 2014

ಯುಗಾದಿ 2014

ಜಯಿಸಲಿ ಧರ್ಮ ಎಂದಿನಂತೆ
ಭಾರತಿಯ ನಯನ ಅರಳಲಿ
ಕಾಣಲಿ ಹೊನ್ನ ಕಮಲದಂತೆ
ಒಮ್ಮನಸ್ಸಿನ ಒಗ್ಗಟ್ಟು ಜಯ ತರಲಿ

ಆದಿ ಕಾಲದಿ ನಡೆದು ಬಂದಿಹ
ಸೃಷ್ಟಿಕರ್ತನ ಲೀಲೆ ಇದು,
ದೂರದಿಂದಲಿ ನಡೆದುಬಂದಿಹ
ಅಲ್ಪನ ಕಣ್ಣಿಗೆ ಹಬ್ಬವಿದು!

ಗುರುವಾರ, ಸೆಪ್ಟೆಂಬರ್ 18, 2014

ಹೊಸ ಜಾಗ

ಬಂದು ನಿಂತ ವೇಳೆ
ಮೊಳಗಿತು ಸು-ಕಹಳೆ
ಗುಡುಗಿ, ಬಿದ್ದಿತು ಮಳೆ
ಕೊಚ್ಚೇ ಹೋಯಿತಿ ಬಹುದಿನಗಳ ಕೊಳೆ !!

ಭಾನುವಾರ, ಫೆಬ್ರವರಿ 16, 2014

ಅಂತರಂಗದ ಅಳಲು

ಕುಂದುತಿದೆ ದೇಶದ ರಾಜಕೀಯ
ಆಳುವನೇ ಮತ್ತೆ ಪರಕೀಯ |?
ಕಾಣುತಿಹೆ ನಾ ಕಳ್ಳರ
ನೋಡುತಿಹೆ ನಾ ಸುಳ್ಳರ |
ಬಾಡುತಿದೆ ನಾಡು
ನಶಿಸುತಿವೆ ಕಾಡು |
ಭಾರತ ಮಾತೆಯು ಅಳುತಿಹಳು
ಶಾಂತಿ ಸೌಹಾರ್ದವ ಬೇಡುತಿಹಳು |
ಏನು ಮಾಡಲಿ ತಿಳಿಯದಾಗಿದೆ,
.
.
.
ಬಾಡಿ ಹೋದ ಬಳ್ಳಿಯಿಂದ ಹೂ ಅರಳಬಲ್ಲದೆ??

ಶುಕ್ರವಾರ, ಫೆಬ್ರವರಿ 14, 2014

ಚೇತನಕ್ಕೆ ಕೋರಿಕೆ

ಓ ಬೆಳಕೆ, ಮರಳಿ ಬಾ ಎಲ್ಲ ಎಲ್ಲೆ ಮೀರಿ
ತೋರು ಬಾ ನೀ ಮುಂದಿನ ದಾರಿ |
ಅಂಜಿಕೆ ನನ್ನ ಎಂದಿನ ವೈರಿ
ತೇರನು ಏರಿ, ನಗುವನು ಬೀರಿ
ಸೆಳೆಯಲು ಬಾ . . . ಚಿತ್ತ ಚೋರಿ ||

ಶುಕ್ರವಾರ, ಆಗಸ್ಟ್ 2, 2013

ಅಮ್ಮ

ತೊದಲಿದರೂ ಮೊದಲಿಗೆ ನುಡಿವ ಶಬ್ದ
ಕೇಳದಿರೆ ಆ ಶಬ್ದ, ತತ್‌ಕ್ಷಣ ಈ ಜಗ ಸ್ತಬ್ಧ !
ಮುಖ ನೋಡದಿರೆ ಏನು ನಷ್ಟ
ಆ ಸುಖ ನೋಡುವುದು ನನಗೆ ಇಷ್ಟ ||

ಇಟ್ಟಾಗ ಮೊದಲ ಅಂಬೆಗಾಲು
ನುಡಿದಾಗ ಮೊದಲ ತೊದಲ ಸಾಲು
ಚಿಮ್ಮುವುದು ನಿನ್ನ ಮುಖಕಮಲದಿ ಹೊನ್ನಗೆ
ಮೂಡುವುದು ಮುಗುಳ್ನಗೆ, ಕಂಡಾಗ ನಮ್ಮ ಆಟ ಬಗೆ-ಬಗೆ ||

ಆಗುವೆ ಏಳುವಾಗಿನ ಕೋಳಿ, ಮಲಗುವಾಗಿನ ಲಾಲಿ
ಓಡುವೆ ಜೊತೆ ಜೊತೆಗೆ ಮೈಲಿ ಮೈಲಿ |
ತೋರುವೆ ಸಿಟ್ಟು, ಕೊಡುವೆ ಏಟು
ಮಾಡದಿರೆನು ಬೊಟ್ಟು, ತಿಳಿದು ಅದರ ಗುಟ್ಟು ||

ಗುಟ್ಟು ರಟ್ಟಾದಾಗಲೆ ನಿನ್ನ ಏಳಿಗೆ
ಅವಳದೇ ಆದರ್ಶ ನಿನ್ನ ಬಾಳಿಗೆ |
ದೊಡ್ಡವರಾದೊಡೆ ಓಡದಿರು ದೂರ
ನೀನೆಂದೂ ಅವಳಿಗೆ 'ಪುಟ್ಟ ಪೋರ' ||

ಭಾನುವಾರ, ಮಾರ್ಚ್ 17, 2013

ನನ್ನ ದೇಶ ನನ್ನ ಜನ


ತಪ್ಪಿದಾಗ ಕೇಳಿದರೆ ಅಂತಾರೆ
ಶತಮಾನಗಳಿಂದ ನಡೆದು ಬಂದ ಪರಂಪರೆ ||
ಇದೆಂಥ ಮನ್ನಣೆ, ಇದೆಂಥ ಬಣ್ಣನೆ
ಬೇಕೇ ಬೇಕು ಇದಕ್ಕೆ ದಂಡನೆ ||

ಶುಕ್ರವಾರ, ಫೆಬ್ರವರಿ 22, 2013

ಸುಯೋಗ (ಅವಕಾಶ)

ತೆರಳದೆ ಮರೆಯಾಗಿ ಹೋದೆ
ಅರಳದೆ ಮೊಗ್ಗಾಗಿ ಉಳಿದೆ |

ಮತ್ತೆ ನೀ ಬಂದಾಗ
ಬಳಿಯಲೇ ನಿಂದಾಗ
ಮಾಡುವೆ ನಿನ್ನ ಸದುಪಯೋಗ
ಇಲ್ಲದಿರೆ ನಾನಾಗುವೆ ನಿರುಪಯೋಗ |

ಬುಧವಾರ, ಫೆಬ್ರವರಿ 20, 2013

ಸ್ಪೂರ್ತಿ

ಅಳುತ ಕುಳಿತಿದ್ದೆ ಕತ್ತಲಲಿ
ನೀ ಬಂದೆ ಬೆಳಕಂತೆ,
ಸ್ಪೂರ್ತಿ ಚಿಮ್ಮಿತು ಬಾಳಿನಲಿ
ಭೋರ್ಗರೆವ ಜೋಗದಂತೆ |

ಸೋಮವಾರ, ಫೆಬ್ರವರಿ 18, 2013

ಗುರು


ಮಿನುಗು ತಾರೆಯಾಗಿ ಬಂದೆ
ಹೊಳೆವ ದೀಪವಾಗಿ ನಿಂದೆ |
ಮೀರಿ ನಿಂತೆ ಎನ್ನ ತಾಯಿ ತಂದೆ
ನಿನ್ನ ಗುಣ ಸುಗುಣ ಒಂದೇ ||